ಆಗಸ್ಟ್ ೧ - ಆಗಸ್ಟ್ ತಿಂಗಳಿನ ಮೊದಲನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೧೩ನೇ ದಿನ (ಅಧಿಕ ವರ್ಷದಲ್ಲಿ ೨೧೪ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ಕ್ರಿ.ಪೂ. ೩೦ - ಮುಂದೆ ಅಗಸ್ಟಸ್ ಎಂದು ನಾಮ ಪಡೆದ ಆಕ್ಟೇವಿಯನ್ ಈಜಿಪ್ಟ್ನ ಅಲೆಗ್ಜಾಂಡ್ರಿಯವನ್ನು ಪ್ರವೇಶಿಸಿ ಅದನ್ನು ರೋಮ್‍ನ ಸಾಮ್ರಾಜ್ಯದ ಆಡಳಿತಕ್ಕೆ ತಂದನು. ೧೪೯೨ - ಸ್ಪೇನ್‍ನ ಐದನೇ ಫೆರ್ಡಿನೆಂಡ್ ಮತ್ತು ಮೊದಲನೇ ಇಸಾಬೆಲ್ ಸ್ಪೇನ್ ರಾಜ್ಯದಿಂದ ಯಹೂದಿ ಜನರನ್ನು ಹೊರಹಟ್ಟಿದರು. ೧೪೯೮ - ಕ್ರಿಸ್ಟೊಫರ್ ಕೊಲಂಬಸ್ ವೆನೆಜುವೆಲದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು. ೧೭೭೪ - ಜೊಸೆಫ್ ಪ್ರೀಸ್ಟ್ಲಿ ಮತ್ತು ಕಾರ್ಲ್ ವಿಲ್ಹೆಲ್ಮ್ ಆಮ್ಲಜನಕವನ್ನು ಪತ್ತೆಮಾಡಿದರು. ೧೮೩೪ - ಬ್ರಿಟಿಷ್ ಸಾಮ್ರಾಜ್ಯದಲ್ಲಿ ಗುಲಾಮಗಿರಿಯನ್ನು ನಿರೋಧಿಸಲಾಯಿತು. ೧೮೯೪ - ಕೊರಿಯದ ವಿಷಯದ ಬಗ್ಗೆ ಮೊದಲ ಚೀನಿ-ಜಪಾನ್ ಯುದ್ಧ ಪ್ರಾರಂಭವಾಯಿತು. ೧೯೬೦ - ಬೆನಿನ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಘೋಷಿಸಿತು. ೧೯೮೧ - ಎಮ್‍ಟಿವಿ ಮೊದಲ ಬಾರಿಗೆ ಪ್ರಸಾರಗೊಂಡಿತು. == ಜನನ == == ನಿಧನ == ೧೯೨೦ - ಬಾಲ ಗಂಗಾಧರ ತಿಲಕ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ ನಾಯಕ. ೧೯೯೯ - ನಿರಾದ್ ಚೌದರಿ, ಭಾರತೀಯ ಮೂಲದ ಸಾಹಿತಿ. == ಹಬ್ಬಗಳು/ಆಚರಣೆಗಳು == ಬೆನಿನ್, ಸ್ವಿಟ್ಜರ್‍ಲ್ಯಾಂಡ್ - ರಾಷ್ಟ್ರೀಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ